ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Hi 
ಇತ್ತೀಚಿನ ಪೋಸ್ಟ್‌ಗಳು

ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ. ತುಮಕೂರಿನ ಶಿರಾ ತಾಲೂಕಿನ ಹುಡುಗಿ ದೀಪಿಕಾ ಟಿಎಸ್.‌ ಈಗ ದೀಪಿಕಾ ಊರು ಹೇಮಾವತಿ ಆಂಧ್ರಪ್ರದೇಶಕ್ಕೆ ಸೇರುತ್ತದೆ. ಐದು ತಿಂಗಳ ಮಗು ಆಗಿದ್ದಾಗ ಉಗುರಿನಲ್ಲಿ ಪರಚಿಕೊಂಡು ಕಣ್ಣು ಹೋಯಿತು. ನರ ವೀಕ್‌ ಇದ್ದರಿಂದ ಆಪರೇಶನ್‌ ಮಾಡಿಸಲು ಆಗೋದಿಲ್ಲ ಎಂದು ಹೇಳಿದ್ದರಂತೆ. ದೀಪಿಕಾ ಅವರು ಊಟಕ್ಕೆ ಒದ್ದಾಡಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಇಷ್ಟು ವರ್ಷ ಕಳೆದಿದೆ. ಕ್ರಿಕೆಟ್‌ನಿಂದ ಹಣ ಸಿಕ್ಕಿದರೆ, ಇಡೀ ತಿಂಗಳು ಮನೆಯವರಿಗೆ ಊಟ ಮಾಡೋಕೆ ರೇಶನ್‌ ಸಿಗುತ್ತದೆ ಎಂಬ ಆಸೆಯಿತ್ತಂತೆ. ಅದರಂತೆ ಅವರು ಕ್ರಿಕೆಟ್‌ ಆಡಿ ವರ್ಲ್‌ಕಪ್‌ ತಂದುಕೊಟ್ಟರು. ನಾನು ಆನಂದಪುರ ಜಿಲ್ಲೆಯಾಗಿದ್ದು, ಈಗ ಸತ್ಯಸಾಯಿಯಾಗಿದೆ. ನಮ್ಮ ಊಟು ಕರ್ನಾಟಕ, ಆಂಧ್ರಪ್ರದೇಶದ ಬಾರ್ಡರ್‌ನಲ್ಲಿ ಬರುವುದು. ನಾನು ಕರ್ನಾಕಟದಲ್ಲಿ ಓದಿದ್ದೇನೆ. ನಮ್ಮ ಊರಿನಲ್ಲಿ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿರುವವರಿಗೆ ಊಟ-ತಿಂಡಿ ಕೂಡ ಸಿಗೋದಿಲ್ಲ ಎಂದು ಪವನ್‌ ಕಲ್ಯಾಣ್‌ ಮುಂದೆ ಹೇಳಿದ್ದಾರೆ. ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರ ಬಳಿ ದೀಪಿಕಾ ಈ ವಿಚಾರವಾಗಿ ಮಾತನಾಡಿದ್ದರು. ದೀಪಿಕಾ ಅವರು ಸಮಸ್ಯೆ ಹೇಳಿಕೊಂಡು ಐದು ನಿಮಿಷಕ್ಕೆ ಓಕೆ ಎಂದಿದ್ದಾರೆ. ಅಷ್ಟ...

BREAKING : ಇಂದಿನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ : ದರ ಏರಿಕೆ ಕೈಬಿಟ್ಟ 'BMRCL' ಅದು ಯಾಕೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ಇಂದಿನಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ. ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

ಮಂಡ್ಯಕ್ಕೆ ಬಂಪರ್ ಗಿಫ್ಟ್ ಕೊಟ್ಟೂದರೆ ಕೇಂದ್ರ ಸಚಿವ ಕುಮಾರಸ್ವಾಮಿ

ಮೈಸೂರು: ಕೇಂದ್ರ ಸಚಿವ ಕುಮಾರಸ್ವಾಮಿ ಇದೀಗ ಮಂಡ್ಯ ಜಿಲ್ಲೆಯ ಜನರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಮಂಡ್ಯದಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ತೆರೆಯಲು ಘೋಷಣೆ ಮಾಡಿದ್ದಾರೆ. ಕೇಂದ್ರದ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಲಘುವಾಗಿ ಮಾತನ್ನಾಡಿದ್ದಾರೆ. 16 ಬಜೆಟ್ ಮಂಡಿಸಿರುವ ಅವರಿಗೆ ಕೇಂದ್ರದ ದೂರದೃಷ್ಟಿಯ ಬಜೆಟ್ ಅರ್ಥವಾಗಿಲ್ಲ. ಅವರು ಸಂಕುಚಿತ ಭಾವನೆ ತೋರಿದ್ದಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಖಾಲಿ ಚಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನರಿಗೆ ಖಾಲಿ ಚಂಬನ್ನೆ ಕೊಡುತ್ತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಹಾಗೂ ರಾಜ್ಯಕ್ಕೆ ಏನು ತಂದಿದ್ದಾರೆ. ಕಾಂಗ್ರೆಸ್ ನಾಯಕರು ಸಣ್ಣತನದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ಅವರ ಪ್ರಶ್ನೆಗೆ ಈಗ ನನ್ನ ಕೆಲಸವರೆ ಉತ್ತರವಾಗಿದೆ. ಕೇಂದ್ರ ಸರ್ಕಾರ ನನಗರ ಮಹತ್ವದ ಜವಬ್ದಾರಿ ನೀಡಿದೆ. ಇದರ ಅನ್ವಯ ರಾಜ್ಯದಲ್ಲಿ ಆಟೋ ಮೊಬೈಲ್ ರಿಸರ್ಚ್ ಆಫ್ ಇಂಡಿಯಾ ಟೆಸ್ಟಿಂಗ್ ಸೆಂಟರ್ ತರಲು ಮುಂದಾಗಿದ್ದೇವೆ. ಈ ಘಟನಕವನ್ನು ಮಂಡ್ಯದಲ್ಲಿಯೇ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಂಡ್ಯದಲ್ಲಿಯೇ ಈ ಆಟೋ ಆಟೋಮೊಬೈಲ್ ಸೆಂಟರ್ ನಿರ್ಮಾಣವಾಗಬೇಕು. ಇದಕ್ಕಾಗಿ ಮಂಡ್ಯದಲ್ಲೇ 100 ಎಕರೆ ಜಾಗವನ್ನು ನೀಡುವಂತೆ ಕೋರಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆ...

BIG NEWS : ಏ.1ರಿಂದ `ಹೊಸ ಆದಾಯ ತೆರಿಗೆ ನಿಯಮಗಳು' ಜಾರಿ : ಮನೆಯಲ್ಲಿರುವ ಚಿನ್ನ-ಆಸ್ತಿಯ ಮೌಲ್ಯ ಹೀಗೆ ನಿರ್ಧರಿಸುತ್ತೆ ಸರ್ಕಾರ.!

ನವದೆಹಲಿ : ದೇಶದ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಆದಾಯ ತೆರಿಗೆ ಇಲಾಖೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇಲಾಖೆಯು "ಆದಾಯ ತೆರಿಗೆ ನಿಯಮಗಳು, 2026" ರ ಕರಡನ್ನು ಬಿಡುಗಡೆ ಮಾಡಿದೆ, ಇದನ್ನು ಸಂಸತ್ತು ಅಂಗೀಕರಿಸಿದ ನಂತರ, ಪ್ರಸ್ತುತ 1962 ರ ತೆರಿಗೆ ನಿಯಮಗಳನ್ನು ಬದಲಾಯಿಸುತ್ತದೆ. ಹೊಸ "ಆದಾಯ ತೆರಿಗೆ ಕಾಯ್ದೆ, 2025" ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಈ ಕಾನೂನನ್ನು ಜಾರಿಗೆ ತರಲು, ಇಲಾಖೆಯು ಈ ಹೊಸ ನಿಯಮಗಳು ಮತ್ತು ನಮೂನೆಗಳಿಗೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಇಲಾಖೆಯು ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ ಮತ್ತು ಈ ಕರಡನ್ನು ಸಾರ್ವಜನಿಕ ವಲಯದಲ್ಲಿ ಇರಿಸಿದೆ ಇದರಿಂದ ಸಾರ್ವಜನಿಕರು ಮತ್ತು ಪಾಲುದಾರರು ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದು. ನೀವು ಈ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಸಲಹೆಗಳನ್ನು ನೀಡಲು ಬಯಸಿದರೆ, ನಿಮಗೆ ಫೆಬ್ರವರಿ 22, 2026 ರವರೆಗೆ ಸಮಯವಿದೆ. ತೆರಿಗೆ ನಮೂನೆಗಳು ಈಗ "ಸ್ಮಾರ್ಟ್" ಆಗಿರುತ್ತವೆ ತೆರಿಗೆದಾರರು ಹೆಚ್ಚಾಗಿ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳು ತುಂಬಾ ಸಂಕೀರ್ಣವಾಗಿವೆ ಎಂದು ದೂರುತ್ತಾರೆ. ಈ ಬಾರಿ, ಕರಡನ್ನು ಸಿದ್ಧಪಡಿಸುವಾಗ, ಇಲಾಖೆಯು ನಿಯಮಗಳ ಭಾಷೆಯನ್ನು ಸರಳಗೊಳಿಸುವತ್ತ ಗಮನಹರಿಸಿದೆ. ಲೆಕ್ಕಾಚಾರಗಳನ್ನು ಸರಳಗೊಳಿಸಲು ಸೂತ್ರಗಳು ಮತ್ತು ಕೋಷ್ಟಕಗಳನ್ನು ಬಳಸಲಾಗಿದೆ. ಹೆಚ್ಚುವರಿಯಾಗಿ, 196...

WPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ವಡೋದರಾದ ಕೊತಾಂಬಿ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತಿದೊಡ್ಡ ಚೇಸ್ ಮಾಡಿದ ದಾಖಲೆ ಬರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 49 ರನ್ ಜತೆಯಾಟವಾಡಿದರು. ಲಿಜೆಲ್ ಲೀ 37 ರನ್ ಗಳಿಸಿದರೆ, ಶಫಾಲಿ ವರ್ಮಾ 20 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 57 ರನ್ ಬಾರಿಸಿದರೆ, ಅಂತಿಮ 19ನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಶಿನೆಲ್ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾ...

ಬೆಂಗಳೂರು ಮೆಟ್ರೋ ದರ ಏರಿಕೆ ಫೆಬ್ರವರಿ 9 ರಿಂದ ಫಿಕ್ಸ್: ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಬೆಂಗಳೂರು: ಬಿಎಂಆರ್‌ಸಿಎಲ್ ನಿರೀಕ್ಷೆಯಂತೆ ಮತ್ತೆ ಮೆಟ್ರೋ ದರ ಏರಿಕೆಯಾಗಿದೆ. ಈ ಹೊಸ ದರಗಳ ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿದೆ. ಪ್ರತೀವರ್ಷ ಸ್ವಯಂಚಾಲಿತವಾಗಿ ಈ ದರ ಪರಿಷ್ಕರಣೆಗೆ "ದರ ನಿಗದಿ ಸಮಿತಿ -(FFC) ಮಾಡಿದ ಶಿಫಾರಸ್ಸಿನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಹೆಚ್ಚಳವಾಗಿದೆ. ವಲಯ ಅಂತರ (km) ಪ್ರಸ್ತುತ ದರ ಪರಿಷ್ಕೃತ ದರ F1 0-2 10 ರೂ 11 ರೂ F2 2-4 20 ರೂ 21 ರೂ F3 4-6 30 ರೂ 32 ರೂ F4 6-8 40ರೂ 42 ರೂ F5 8-10 50 ರೂ 53 ರೂ F6 10-15 60 ರೂ 63 ರೂ F7 15-20 70 ರೂ 74 ರೂ F8 20-25 80 ರೂ 84 ರೂ F9 25-30 90 ರೂ 95 ರೂ F10 30> 90 ರೂ 95 ರೂ ರಿಯಾಯಿತಿ ಮುಂದುವರಿಕೆ ಬಿಎಂಆರ್‌ಸಿಎಲ್ ಸ್ಮಾರ್ಟ್-ಕಾರ್ಡ್/NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ರಿಯಾಯಿತಿಗಳ ಮುಂದುವರಿಕೆ • ಪೀಕ್ ಸಮಯದಲ್ಲಿ ಶೇ 5 ರಿಯಾಯಿತಿ, • ಪೀಕ್ ಅಲ್ಲದ ಸಮಯದಲ್ಲಿ ಶೇ 10 ರಿಯಾಯಿತಿ, • ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ. ಮಾನ್ಯತೆ ಪ್ರಸ್ತುತದರ (ರೂ.) ಪರಿಷ್ಕೃತದರ (ರೂ.) ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್‌ ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್ ಒಂದು ದಿನ 300 250 313 263...