ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

India ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ

ನವದೆಹಲಿ, ಫೆಬ್ರುವರಿ 3: ವಾಟ್ಸಾಪ್​ನ ಗೌಪ್ಯತಾ ನೀತಿ (WhasApp Privacy Policy) ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. 'ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ. ನಮ್ಮ ಒಂದು ಡಿಜಿಟ್ ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆ ಉಳಿಸೋದಕ್ಕೆ ಆಗಲ್ಲ ಅಂದರೆ ಭಾರತದಿಂದ ನಿರ್ಗಮಿಸಿ' ಎಂದು ವಾಟ್ಸಾಪ್​ನ ಮಾತೃ ಸಂಸ್ಥೆಯಾದ ಮೆಟಾಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ (ಫೆ. 3) ತಪರಾಕಿ ಹಾಕಿದೆ. ಭಾರತೀಯ ಸ್ಪರ್ಧಾ ಆಯೋಗವು ಒಟಿಟಿ ಮೆಸೇಜಿಂಗ್ ಮಾರುಕಟ್ಟೆಯ ಪ್ರಾಬಲ್ಯವನ್ನು ವಾಟ್ಸಾಪ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾರಣಕ್ಕೆ ಭಾರತೀಯ ಸ್ಪರ್ಧಾ ಆಯೋಗವು ವಾಟ್ಸಾಪ್ ಮತ್ತು ಮೆಟಾಗೆ 213 ಕೋಟಿ ರೂ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ ಈ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಮೆಟಾ ಸಂಸ್ಥೆಗಳು ಸುಪ್ರೀಂ ಮೆಟ್ಟಿಲೇರಿದ್ದವು. ಇದರ ವಿಚಾರಣೆಯನ್ನು ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಕೈಗೆತ್ತಿಕೊಂಡಿದೆ. ಈ ವೇಳೆ ವಾಟ್ಸಾಪ್ ನೀತಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ಬಳಸಿಕೊಂಡು ಬಳಕೆದಾರರ ದತ್ತಾಂಶವನ್ನು ವಾಣಿಜ್ಯಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಪ್ರಮುಖ ಆರೋಪ. ಮುಖ್ಯ ನ್ಯಾಯಮೂರ...

ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?

ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿದ್ದ ಜಿಎಸ್‌ಟಿ ಪರಿಹಾರ ಸೆಸ್ ಬದಲಿಗೆ ಹೊಸ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಜಾರಿ ಮಾಡಿದೆ. ಈ ಹೊಸ ತೆರಿಗೆ ಫೆಬ್ರವರಿ 1 ರಿಂದ ಜಾರಿಯಾಗಿದೆ. ಇದರಿಂದಾಗಿ ಒಂದು ಪ್ಯಾಕೆಟ್ ಸಿಗರೇಟ್ ಬೆಲೆ ರೂ. 22 ರಿಂದ ರೂ.25 ರಷ್ಟು ಹೆಚ್ಚಾಗಿದೆ. 10 ಸಿಗರೇಟ್‌ಗಳ ಪ್ಯಾಕೆಟ್ ಬೆಲೆ ರೂ.25 ರಷ್ಟು ಹೆಚ್ಚಾಗಿದೆ. ವಿಲ್ಸ್ ನೇವಿ ಕಟ್ ಬೆಲೆ ರೂ.95 ರಿಂದ ರೂ.120 ಕ್ಕೆ ಏರಿದೆ. ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್ ಬೆಲೆ ರೂ.170 ರಿಂದ ರೂ.225 ಕ್ಕೆ ಹೆಚ್ಚಳವಾಗಿದೆ. ಒಂದು ಸಿಗರೇಟ್ ಬೆಲೆ ಗಾತ್ರಕ್ಕೆ ತಕ್ಕಂತೆ ಏರಿಕೆಯಾಗಿದೆ. 65mm ಫಿಲ್ಟರ್ ಇಲ್ಲದ ಸಿಗರೇಟ್‌ಗೆ ರೂ.2.5, ಫಿಲ್ಟರ್ ಇದ್ದರೆ ರೂ.2.10 ಏರಿಕೆ. 70-75mm ಸಿಗರೇಟ್‌ಗೆ ರೂ.5.40 ಹಾಗೂ ಪ್ರೀಮಿಯಂ ಸಿಗರೇಟ್‌ಗಳಿಗೆ ರೂ.8.50 ವರೆಗೆ ಬೆಲೆ ಹೆಚ್ಚಳವಾಗಿದೆ. ಸಿಗರೇಟ್ ಸೇದುವುದು ಸೇದೋರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಹಾನಿಕಾರಕ. ಹೀಗಾಗಿ ಬೆಲೆ ಏರಿಕೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ಈ ಬೆಲೆ ಏರಿಕೆಯಿಂದ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳು ಹೆಚ್ಚಾಗಬಹುದು ಎಂದು ವಿತರಕರು ಎ...