ಕನ್ನಡ ಸಿನಿ ಪ್ರಿಯರಿಗೆ ಡಿಸೆಂಬರ್ ತಿಂಗಳು ಸುಗ್ಗಿಯ ಸಮಯ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆದ ಎರಡು ವಾರಗಳ ಬಳಿಕ '45' ಹಾಗೂ 'ಮಾರ್ಕ್' ಸಿನಿಮಾ (Mark Movie) ತೆರೆಗೆ (ಡಿಸೆಂಬರ್ 25) ಬಂದವು. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ. ಈ ಚಿತ್ರಗಳ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ಇಲ್ಲಿದೆ ವಿವರ. 'ಮಾರ್ಕ್' ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಮಿಳಿನ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ವಿಜಯ್ ಕಾರ್ತಿಕೇಯ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ 'ಮಾರ್ಕ್' ಶೇಡ್ನಲ್ಲಿಯೇ ಮೂಡಿ ಬಂದಿದೆ ಎಂಬ ಮಾತಿದೆ. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಈ ಸಿನಿಮಾ ಕಲೆಕ್ಷನ್ ಬಗ್ಗೆ sacnilk ವರದಿ ಮಾಡಿದೆ. ಇದರ ವರದಿ ಪ್ರಕಾರ ಸಿನಿಮಾದ ಒಟ್ಟೂ ಕಲೆಕ್ಷನ್ 18.50 ಕೋಟಿ ರೂಪಾಯಿ ಆಗಿದೆ. ಮೊದಲ ದಿನ ಈ ಚಿತ್ರ 8.6 ಕೋಟಿ ರೂಪಾಯಿ (sacnilk ವರದಿ ಪ್ರಕಾರ), ಎರಡು, ಮೂರು ಹಾಗೂ ನಾಲ್ಕನೇ ದಿನ ಸಿನಿಮಾ ಸರಾಸರಿ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 18.5 ಕೋಟಿ ರೂಪಾಯಿ ಆಗಿದೆ. ಗ್ರಾಸ್ ಕಲೆಕ್ಷನ್ 22 ಕೋಟಿ ರೂಪಾಯಿ ಆಗಿದೆ. ಇನ್ನು, '45' ಸಿನಿಮ...