ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿದ್ದ ಜಿಎಸ್‌ಟಿ ಪರಿಹಾರ ಸೆಸ್ ಬದಲಿಗೆ ಹೊಸ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಜಾರಿ ಮಾಡಿದೆ. ಈ ಹೊಸ ತೆರಿಗೆ ಫೆಬ್ರವರಿ 1 ರಿಂದ ಜಾರಿಯಾಗಿದೆ. ಇದರಿಂದಾಗಿ ಒಂದು ಪ್ಯಾಕೆಟ್ ಸಿಗರೇಟ್ ಬೆಲೆ ರೂ. 22 ರಿಂದ ರೂ.25 ರಷ್ಟು ಹೆಚ್ಚಾಗಿದೆ. 10 ಸಿಗರೇಟ್‌ಗಳ ಪ್ಯಾಕೆಟ್ ಬೆಲೆ ರೂ.25 ರಷ್ಟು ಹೆಚ್ಚಾಗಿದೆ. ವಿಲ್ಸ್ ನೇವಿ ಕಟ್ ಬೆಲೆ ರೂ.95 ರಿಂದ ರೂ.120 ಕ್ಕೆ ಏರಿದೆ. ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್ ಬೆಲೆ ರೂ.170 ರಿಂದ ರೂ.225 ಕ್ಕೆ ಹೆಚ್ಚಳವಾಗಿದೆ. ಒಂದು ಸಿಗರೇಟ್ ಬೆಲೆ ಗಾತ್ರಕ್ಕೆ ತಕ್ಕಂತೆ ಏರಿಕೆಯಾಗಿದೆ. 65mm ಫಿಲ್ಟರ್ ಇಲ್ಲದ ಸಿಗರೇಟ್‌ಗೆ ರೂ.2.5, ಫಿಲ್ಟರ್ ಇದ್ದರೆ ರೂ.2.10 ಏರಿಕೆ. 70-75mm ಸಿಗರೇಟ್‌ಗೆ ರೂ.5.40 ಹಾಗೂ ಪ್ರೀಮಿಯಂ ಸಿಗರೇಟ್‌ಗಳಿಗೆ ರೂ.8.50 ವರೆಗೆ ಬೆಲೆ ಹೆಚ್ಚಳವಾಗಿದೆ. ಸಿಗರೇಟ್ ಸೇದುವುದು ಸೇದೋರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಹಾನಿಕಾರಕ. ಹೀಗಾಗಿ ಬೆಲೆ ಏರಿಕೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ಈ ಬೆಲೆ ಏರಿಕೆಯಿಂದ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳು ಹೆಚ್ಚಾಗಬಹುದು ಎಂದು ವಿತರಕರು ಎ...