Allu Arjun: ನಟ ಅಲ್ಲು ಅರ್ಜುನ್ ‘ ಪುಷ್ಪ 2’ ಸಿನಿಮಾದ ಬಳಿಕ ಇಡೀ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ . ಅವರು ಪಡೆಯುವಷ್ಟು ಸಂಭಾವನೆಯನ್ನು ಪ್ರಭಾಸ್ ಸಹ ಪಡೆಯುತ್ತಿಲ್ಲ . ಇದೀಗ ಅವರು ಅಟ್ಲಿ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದು , ಈ ಸಿನಿಮಾಕ್ಕೂ ಸಹ ಭಾರಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ . ಎಷ್ಟು ಗೊತ್ತೆ ? ‘ ಪುಷ್ಪ 2’ ಸಿನಿಮಾದ ಮೂಲಕ ಅಲ್ಲು ಅರ್ಜುನ್ , ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ . ‘ ಪುಷ್ಪ 2’ ಸಿನಿಮಾಕ್ಕಾಗಿ ಅವರು ಹಲವು ವರ್ಷಗಳನ್ನು ಮೀಸಲಿಟ್ಟಿದ್ದರು . ಹೀಗಾಗಿ ಈ ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆಯನ್ನೇ ಅಲ್ಲು ಅರ್ಜುನ್ ಪಡೆದಿದ್ದರು . ಕೆಲ ಮೂಲಗಳ ಪ್ರಕಾರ ಸಿನಿಮಾದ ಒಟ್ಟು ಕಲೆಕ್ಷನ್ ನಲ್ಲಿ 35-40% ಭಾಗವನ್ನು ಅಲ್ಲು ಅರ್ಜುನ್ ತಮ್ಮ ಸಂಭಾವನೆಯಾಗಿ ಪಡೆದಿದ್ದಾರೆ ಎನ್ನಲಾಗಿದೆ . ಇದೀಗ ಅಲ್ಲು ಅರ್ಜುನ್ ತಮ್ಮ ಹೊಸ ಸಿನಿಮಾಕ್ಕೂ ಸಹ ಭಾರಿ ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ . ‘ ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್ ಪಾಲಿಗೆ ವಿಶೇಷ ಸಿನಿಮಾ ಆಗಿತ್ತು . ಈ ಸಿನಿಮಾಕ್ಕಾಗಿ ಬಹಳ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದರು ಹೆಚ್ಚಿನ ಶ್ರಮ ಹಾಕಿದ್ದರು ಹಾಗಾಗಿ ಆ ಸಿನಿಮಾಕ್ಕೆ ಹೆಚ್ಚಿನ ಸಂಭಾವ...