ಬೆಂಗಳೂರು: ಬಿಎಂಆರ್‌ಸಿಎಲ್ ನಿರೀಕ್ಷೆಯಂತೆ ಮತ್ತೆ ಮೆಟ್ರೋ ದರ ಏರಿಕೆಯಾಗಿದೆ. ಈ ಹೊಸ ದರಗಳ ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿದೆ. ಪ್ರತೀವರ್ಷ ಸ್ವಯಂಚಾಲಿತವಾಗಿ ಈ ದರ ಪರಿಷ್ಕರಣೆಗೆ "ದರ ನಿಗದಿ ಸಮಿತಿ -(FFC) ಮಾಡಿದ ಶಿಫಾರಸ್ಸಿನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಹೆಚ್ಚಳವಾಗಿದೆ. ವಲಯ ಅಂತರ (km) ಪ್ರಸ್ತುತ ದರ ಪರಿಷ್ಕೃತ ದರ F1 0-2 10 ರೂ 11 ರೂ F2 2-4 20 ರೂ 21 ರೂ F3 4-6 30 ರೂ 32 ರೂ F4 6-8 40ರೂ 42 ರೂ F5 8-10 50 ರೂ 53 ರೂ F6 10-15 60 ರೂ 63 ರೂ F7 15-20 70 ರೂ 74 ರೂ F8 20-25 80 ರೂ 84 ರೂ F9 25-30 90 ರೂ 95 ರೂ F10 30> 90 ರೂ 95 ರೂ ರಿಯಾಯಿತಿ ಮುಂದುವರಿಕೆ ಬಿಎಂಆರ್‌ಸಿಎಲ್ ಸ್ಮಾರ್ಟ್-ಕಾರ್ಡ್/NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ರಿಯಾಯಿತಿಗಳ ಮುಂದುವರಿಕೆ • ಪೀಕ್ ಸಮಯದಲ್ಲಿ ಶೇ 5 ರಿಯಾಯಿತಿ, • ಪೀಕ್ ಅಲ್ಲದ ಸಮಯದಲ್ಲಿ ಶೇ 10 ರಿಯಾಯಿತಿ, • ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ. ಮಾನ್ಯತೆ ಪ್ರಸ್ತುತದರ (ರೂ.) ಪರಿಷ್ಕೃತದರ (ರೂ.) ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್ ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್ ಒಂದು ದಿನ 300 250 313 263...