ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

latest news ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

BREAKING : ಇಂದಿನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ : ದರ ಏರಿಕೆ ಕೈಬಿಟ್ಟ 'BMRCL' ಅದು ಯಾಕೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ಇಂದಿನಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ. ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ

  ಕುರುಬ Vs ಗೌಡ :  ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಯಾರು ಎಂದು ತಿಳಿಯುವ ಸಮಯ ಬಂದಾಗಿದೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ವೀಕ್ಷಕರು ಮತ್ತು ಅಭಿಮಾನಿಗಳು ವೋಟ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಬೇಕಿದೆ. ಸ್ಪರ್ಧಿಗಳೆಲ್ಲರೂ ದೊಡ್ಮನೆ ಸೇರುವ ಮುನ್ನವೇ ಸಾಮಾಜಿಕ ಜಾಲತಾಣದ ಖಾತೆಗಳನ್ನು ಮೂರನೇ ವ್ಯಕ್ತಿಗೆ ನೀಡಿರುತ್ತಾರೆ. ಇದನ್ನು ಪಿಆರ್ ಅಂತಾ ಕರೆಯಲಾಗುತ್ತದೆ. ಸದ್ಯ ಇಬ್ಬರು ಸ್ಪರ್ಧಿಳಿಗೆ ವೋಟ್ ಮಾಡುವ ವಿಷಯ ಜಾತಿ ರಾಜಕಾರಣಕ್ಕೆ ತಿರುಗಿರೋದಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿಯೊಬ್ಬರು ಕ್ಯಾಕರಿಸಿ ಉಗಿದಿದ್ದಾರೆ. ಸೀಸನ್ 12ರಲ್ಲಿ ಪಿಆರ್ ಮಾಫಿಯಾ! ಈ ಬಾರಿಯ ಸೀಸನ್‌ನಲ್ಲಿ ಪಿಆರ್ ಮಾಫಿಯಾ ನಡೆಯುತ್ತಿದೆ. ಈ ಬೆಳವಣಿಗೆ ಯಾವ ಆಯಾಮದಲ್ಲಿಯೂ ಒಳ್ಳೆಯದಲ್ಲ. ಒಂದು ರಿಯಾಲಿಟಿ ಶೋನ ವಿನ್ನರ್ ಯಾರಾಗಬೇಕು ಅನ್ನೋದರ ಬಗ್ಗೆ ರಾಜಕೀಯ ನಡೆಯುತ್ತಿದೆ. ಶಾಸಕರು, ರಾಜಕೀಯ ಮುಖಂಡರು ವಿಡಿಯೋ ಮೂಲಕ ಸ್ಪರ್ಧಿಗಳ ಪರವಾಗಿ ಮತಯಾಚನೆ ಮಾಡತ್ತಿರೋದನ್ನು ಅಚ್ಚರಿಯನ್ನುಂಟು ಮಾಡುತ್ತಿದೆ ಎಂದು ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿ, ಚಂದನವನದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಬೇಸರ ವ್ಯಕ್ತಪಡಿಸಿದ್ದಾರೆ. ಕುರುಬ Vs ಗೌಡ' ಯಾಕೆ ಈ ಜಾತಿ? ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ವೋಟಿಂಗ್ ವಿಷಯ ಗೌಡ ವರ್ಸಸ್ ಕುರುಬ ಎಂದು ಬಿಂಬಿತವಾ...

ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ : ನಿವೃತ್ತಿ ವಯಸ್ಸಿನ ಮಿತಿ 65 ಕ್ಕೆ ಏರಿಸಿ ಸರ್ಕಾರದ‌ ಹೊಸ ಆದೇಶ

  ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 60ರಿಂದ 62 ಅಥವಾ 65 ವರ್ಷಕ್ಕೆ ಏರಿಸಲಾಗುತ್ತದೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಈ ಸುದ್ದಿಗಳು ನೌಕರರಲ್ಲಿ ಆಸೆ ಮತ್ತು ಗೊಂದಲವನ್ನು ಉಂಟುಮಾಡಿವೆ. ಆದರೆ, ಕೇಂದ್ರ ಸಿಬ್ಬಂದಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ನೀಡಿದ ಸ್ಪಷ್ಟೀಕರಣದ ಪ್ರಕಾರ, ನಿವೃತ್ತಿ ವಯೋಮಿತಿಯನ್ನು ಏರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳೇ ಆಗಿದೆ. ಈ ಲೇಖನದಲ್ಲಿ ನಿವೃತ್ತಿ ವಯೋಮಿತಿಯ ಇತಿಹಾಸ, ಪ್ರಸ್ತುತ ನಿಯಮಗಳು, ವಿಶೇಷ ವರ್ಗಗಳಿಗೆ ಇರುವ ವಿಸ್ತರಣೆ, ತಪ್ಪು ಸುದ್ದಿಗಳ ಹಿನ್ನೆಲೆ ಮತ್ತು ಸರ್ಕಾರದ ಅಧಿಕೃತ ನಿಲುವನ್ನು ಸವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ  ವಾಟ್ಸ್ ಆಪ್    ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು   ಇಲ್ಲಿ ಕ್ಲಿಕ್ ಮಾಡಿ . ಪ್ರಸ್ತುತ ನಿವೃತ್ತಿ ವಯೋಮಿತಿ ಮತ್ತು ಇತಿಹಾಸ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 1998ರಲ್ಲಿ ಐದನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಮೇಲೆ 58ರಿಂದ 60 ವರ್ಷಕ್ಕೆ ಏರಿಸಲಾಗಿತ್ತು. ಈ ನಿಯಮವು ಇಂದಿಗೂ ಜಾರಿಯಲ್ಲಿದ್ದು, ಹೆಚ್ಚಿನ ನೌಕರರು 60 ವರ್ಷ ತುಂಬಿದ ತಿಂಗಳ ಕೊನೆಯ ದಿನ ನಿವೃತ್ತರಾಗುತ...

Gold Rate: ವಾರದ ಆರಂಭದಲ್ಲೇ ಮತ್ತೊಂದು ದಾಖಲೆ ಬರೆದ ಚಿನ್ನ: ಬೆಲೆ ಜಿಗಿತಕ್ಕೆ ಇಲ್ಲಿದೆ 5 ಮುಖ್ಯ ಕಾರಣ

2025ರ ಅಕ್ಟೋಬರ್ ತಿಂಗಳಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ದುರ್ಬಲತೆ, ಹಾಗೂ ಹಬ್ಬದ ಸಮಯದ ಬೇಡಿಕೆಯಂತಹ ಕಾರಣಗಳಿಂದ ಚಿನ್ನದ ಬೆಲೆ ಗಗನಕ್ಕೇರಿದೆ. ಈ ಲೇಖನದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯ ಹಿಂದಿನ ಪ್ರಮುಖ ಕಾರಣಗಳು, ಇಂದಿನ ಬೆಲೆ ವಿವರಗಳು, ಮತ್ತು ಹೂಡಿಕೆಗೆ ಸಂಬಂಧಿಸಿದ ಸಲಹೆಗಳನ್ನು ವಿವರವಾಗಿ ತಿಳಿಸಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ವಾಟ್ಸಾಪ್  ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು   ಇಲ್ಲಿ ಕ್ಲಿಕ್ ಮಾಡಿ . ಇಂದಿನ ಚಿನ್ನದ ಬೆಲೆ ವಿವರಗಳು ಅಕ್ಟೋಬರ್ 6, 2025ರಂದು, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,077 ರೂಪಾಯಿಗಳಷ್ಟಿದ್ದು, ಒಂದೇ ದಿನದಲ್ಲಿ 1,370 ರೂಪಾಯಿಗಳ ಏರಿಕೆ ದಾಖಲಾಗಿದೆ. ಇದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 11,070 ರೂಪಾಯಿಗಳಾಗಿದ್ದು, 125 ರೂಪಾಯಿಗಳ ಏರಿಕೆ ಕಂಡಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,20,770 ರೂಪಾಯಿಗಳಷ್ಟಿದ್ದು, 1,370 ರೂಪಾಯಿಗಳ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,10,700 ರೂಪಾಯಿಗಳಾಗಿದ್ದು, 1,250 ರೂಪಾಯಿಗಳ ಏರಿಕೆಯನ್ನು ತೋರಿಸಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯೂ ಕೂಡ 1 ಕೆಜಿಗೆ 1,56,000 ರೂಪಾಯಿಗಳಷ್ಟಿದ್ದು, 1,...

ಪ್ರತಿಯೊಬ್ಬ ಭಾರತೀಯನ ಹತ್ರ ಇರ್ಬೇಕಾದ 6 ಪ್ರಮುಖ ಸರ್ಕಾರಿ ಕಾರ್ಡ್ ಗಳಿವು ತಪ್ಪಿದೆ ಮಾಡ್ಸಿಕೊಳ್ಳಿ.!

ಭಾರತದಲ್ಲಿ, ಸರ್ಕಾರವು ತನ್ನ ನಾಗರಿಕರಿಗೆ ವಿವಿಧ ಸೇವೆಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು ಹಲವಾರು ಗುರುತಿನ ಚೀಟಿಗಳನ್ನು ಒದಗಿಸುತ್ತದೆ. ಈ ಕಾರ್ಡ್‌ಗಳು ಕೇವಲ ಗುರುತಿನ ಪುರಾವೆಯಾಗಿರದೆ, ಬ್ಯಾಂಕಿಂಗ್, ಶಿಕ್ಷಣ, ಪ್ರಯಾಣ, ಮತದಾನ ಮತ್ತು ಸಾಮಾಜಿಕ ಯೋಜನೆಗಳಿಗೆ ಅಗತ್ಯವಾಗಿವೆ. ಈ ಲೇಖನದಲ್ಲಿ, ಭಾರತೀಯ ನಾಗರಿಕರಿಗೆ ಉಚಿತವಾಗಿ ಲಭ್ಯವಿರುವ ಆರು ಪ್ರಮುಖ ಸರ್ಕಾರಿ ಕಾರ್ಡ್‌ಗಳ ಬಗ್ಗೆ ವಿವರವಾಗಿ ತಿಳಿಯೋಣ. ಈ ಕಾರ್ಡ್‌ಗಳು ಯಾವುವು, ಏಕೆ ಅಗತ್ಯ, ಹೇಗೆ ಪಡೆಯಬಹುದು, ಯಾರಿಗೆ ಅಗತ್ಯ, ಮತ್ತು ಇವು ಇಲ್ಲದಿದ್ದರೆ ಎದುರಾಗಬಹುದಾದ ತೊಂದರೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ವಾಟ್ಸಪ್ಪ್  ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ .. ಆರು ಪ್ರಮುಖ ಸರ್ಕಾರಿ ಗುರುತಿನ ಚೀಟಿಗಳು ಭಾರತ ಸರ್ಕಾರವು ಒದಗಿಸುವ ಈ ಕಾರ್ಡ್‌ಗಳು ಪೌರತ್ವದ ಪುರಾವೆಯೊಂದಿಗೆ, ವಿವಿಧ ಸೇವೆಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತವೆ. ಈ ಕಾರ್ಡ್‌ಗಳನ್ನು ಉಚಿತವಾಗಿ ಅಥವಾ ಕನಿಷ್ಠ ಶುಲ್ಕದೊಂದಿಗೆ ಪಡೆಯಬಹುದು, ಮತ್ತು ಇವು ದೈನಂದಿನ ಜೀವನದಲ್ಲಿ ಅತ್ಯಗತ್ಯವಾಗಿವೆ. 1. ಆಧಾರ್ ಕಾರ್ಡ್ ಆಧಾರ್ ಕಾರ್ಡ್ ಭಾರತದ ನಾಗರಿಕರಿಗೆ ಸರ್ಕಾರವು ಒದಗಿಸುವ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ. ಇದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿದ್ದು, ವ...

ಕರ್ನಾಟಕದಲ್ಲಿ ಮಳೆಯ ಅಬ್ಬರ: ಅಕ್ಟೋಬರ್ 11ರ ವರೆಗೆ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವರ್ಷಧಾರೆ

ಬೆಂಗಳೂರು , ಅಕ್ಟೋಬರ್ 06: ಈ ಬಾರಿ ರಾಜ್ಯದಲ್ಲಿ ಮಳೆಯ ಅಬ್ಬರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ದಿನ ಕೊಂಚ ವಿರಾಮ ಸಿಕ್ಕರೂ, ಮಾರನೇ ದಿನವೇ ಮತ್ತೆ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 11ರ ವರೆಗೆ ರಾಜ್ಯದಾದ್ಯಂತ ಮಳೆ ಮುಂದುವರಿಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ವಾಟ್ಸಪ್ಪ್  ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ: ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಮಳೆ ಬೀಳುವ ನಿರೀಕ್ಷೆಯಿರುವ ಜಿಲ್ಲೆಗಳ ವಿವರ ಇಂತಿದೆ: ಕರಾವಳಿ ಜಿಲ್ಲೆಗಳು: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ. ಉತ್ತರ ಒಳನಾಡು ಜಿಲ್ಲೆಗಳು: ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ. ದಕ್ಷಿಣ ಒಳನಾಡು ಜಿಲ್ಲೆಗಳು: ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ. ಈ ಪ್ರದೇಶಗಳಲ್ಲಿ ಮಳೆ ದಾಖಲು: ಇತ್ತೀಚೆಗೆ ಗೋಪಾಲನಗರ, ಎಂ.ಎಂ. ಹಿಲ್ಸ್, ಭಾಗಮಂಡಲ, ಕೋಲಾರ, ಕುಂದಾಪುರ, ಮಾಗಡಿ, ಬೆಂಗಳೂರು, ಶಕ್ತಿನ...

ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಈ 5 ರಾಶಿಯವರಿಗೆ ತುಂಬಾ ಲಕ್ಕಿ..!

Surya Grahan 2025:   ವೈದಿಕ ಪಂಚಾಂಗದ ಪ್ರಕಾರ, 100 ವರ್ಷಗಳ ನಂತರ ವರ್ಷದ ಕೊನೆಯ ಸೂರ್ಯಗ್ರಹಣವು ಮಹಾಲಯ ಅಮಾವಾಸ್ಯೆಯಂದು ಎಂದರೆ ಪಿತೃ ಪಕ್ಷದ ಸಮಯದಲ್ಲಿ ಸಂಭವಿಸಲಿದೆ. ಇದಲ್ಲದೇ ಈ ದಿನ, ಶನಿಯು ಸೂರ್ಯನೊಂದಿಗೆ ಸಂಯೋಜನೆಗೊಂಡು ವಿಶೇಷ ಯೋಗವನ್ನು ರೂಪಿಸಲಿದ್ದಾನೆ. ಇದರಿಂದಾಗಿ ಈ ಮೂರು ರಾಶಿಗಳು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಹೊಸ ಉದ್ಯೋಗದ ಜೊತೆಗೆ ಹಣದ ಲಾಭದ ಸಾಧ್ಯತೆ ಕೂಡ ಇದೆ. ಆ ಲಕ್ಕಿ ರಾಶಿಗಳಾವುವು ಎಂಬುದು ಇಲ್ಲಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಈ ಬಾರಿ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಬಹಳ ವಿಶೇಷವಾಗಿರುತ್ತದೆ. ಸೂರ್ಯಗ್ರಹಣವು ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ, ವಿಶೇಷವಾಗಿ ಪಿತೃಪಕ್ಷದಲ್ಲಿ ಬಂದಾಗ, ಅದರ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಗ್ರಹಣದ ಸಮಯದಲ್ಲಿ, ಶುಭ ಮತ್ತು ಅಶುಭ ಶಕ್ತಿಗಳು ಎರಡೂ ಸಕ್ರಿಯಗೊಳ್ಳುತ್ತವೆ. ಈ ಸಮಯದಲ್ಲಿ ಪರಿಹಾರಗಳು ಮತ್ತು ಆಚರಣೆಗಳನ್ನು ಸರಿಯಾಗಿ ಮಾಡಿದರೆ, ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಾಧ್ಯ ಎನ್ನುವುದು ನಂಬಿಕೆ. ಈ ಬಾರಿ ವರ್ಷದ ಕೊನೆಯ ಸೂರ್ಯಗ್ರಹಣವು 2025 ಸೆಪ್ಟೆಂಬರ್ 21 ಭಾನುವಾದಂದು ನಡೆಯಲಿದೆ. ಸೂರ್ಯಗ್ರಹಣವು ಕನ್ಯಾರಾಶಿಯಲ್ಲಿ ನಡೆಯುತ್ತಿದೆ ಮತ್ತು ಆ ಸಮಯದಲ್ಲಿ ಶನಿಯು ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ. ನ್ಯಾಯ ಮತ್ತು ಕರ್ಮದ ಅಂಶವಾದ ಶನಿಯ ಈ ಸ್ಥಾನವು ಗ್ರಹಣದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಗ್ರಹಗಳ ಈ ಸಂಯೋಜನೆಯು ...

ಬೆಂಗಳೂರು ಜನತೆ ಗಮನಕ್ಕೆ: ಸೆ.13ರ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11ಕೆವಿ ಹೆಚ್.ಎ.ಎಲ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 13.09.2025 (ಶನಿವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇಸ್ರೋ (ಮಾರತ್ತಹಳ್ಳಿ ಮತ್ತು ಎನ್‌ಎಎಲ್), ಬಾಗ್ಮನೆ ಟೆಕ್ ಪಾರ್ಕ್, ಜಿಟಿರೆ, ಡಬ್ಲ್ಯುಟಿಸಿ, 220 ಕೆವಿ ಹಾಲ್ ಎಹೆಚ್ಟಿ, ಇಂದಿರಾನಗರ ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1 ನೇ ಮತ್ತು 2 ನೇ ಹಂತ, 80 ಅಡಿ ರಸ್ತೆ, ಸಿಎಮ್ಹೆಚ್ ರಸ್ತೆ, ಕೃಷ್ಣ ದೇವಸ್ಥಾನ ರಸ್ತೆ ಎಚ್ ಕಾಲೋನಿ, ಜೀವನ್ ಭೀಮಾ, ಮಠನಗರ 1 ಜೀವನ್ ಭೀಮನಗರ, ಬಿಡಿ ಲೇಔಟ್, ಎಲ್‌ಐಸಿ ಕಾಲೋನಿ, ತಿಪ್ಪನಸಂದ್ರ, ರಮೇಶ್ ನಗರ, ಡಿಫೆನ್ಸ್ ವ್ಯಾಪ್ತಿಯಲ್ಲಿ ಕರೆಂಟ್ ಇರೋದಿಲ್ಲ. ಮಲ್ಲೇಶಪಾಳ್ಯ, ಮಾರುತಿ ನಾರ್, ಕಲ್ಲಪ್ಪ ಲೇಔಟ್, ರಾಜಣ್ಣ ಮತ್ತು ಎಲ್ ಎನ್ ರೆಡ್ಡಿ ಕಾಲೋನಿ, ಬಸವನಗರ, ಅಣ್ಣಾಸಂದ್ರ ಪಾಳ್ಯ, ಜೌಟ್, ಜೌಟ್ ರಸ್ತೆ, ಕೃಷ್ಣಪ್ಪ ಉದ್ಯಾನ, ವಿಮಾನ ನಿಲ್ದಾಣ ರಸ್ತೆ, ಟೆಕ್ಸಾಸ್, IAM, ಮಾರತಹಳ್ಳಿ, ದೊಡ್ಡನೆಕುಂಡಿ, ನ್ಯಾಯಾಲಯ ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Vice President: ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಇಂದು ಪ್ರಮಾಣವಚನ

ನವದೆಹಲಿ: ಸಿ.ಪಿ.ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದುವರೆಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಗುಜರಾತ್‌ನ ರಾಜ್ಯಪಾಲ ದೇವವ್ರತ್‌ ಆಚಾರ್ಯ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ನಾಯಕರಿಗೆ ಈಗಾಗಲೇ ಆಹ್ವಾನ ಕಳುಹಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ರಾಜ್ಯಸಭೆಯ ಸಭಾ ನಾಯಕರನ್ನು ರಾಧಾಕೃಷ್ಣನ್‌ ಭೇಟಿಯಾಗಲಿದ್ದಾರೆ. ನಂತರ ನಡೆಯಲಿರುವ ಸಭೆಗೆ ಎಲ್ಲ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.