ವಿಷಯಕ್ಕೆ ಹೋಗಿ

BREAKING : ಇಂದಿನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ : ದರ ಏರಿಕೆ ಕೈಬಿಟ್ಟ 'BMRCL' ಅದು ಯಾಕೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು.


ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ.

ಹಾಗಾಗಿ ಇಂದಿನಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ. ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Royal Challengers Bengaluru

  Royal Challengers Bengaluru ,

Budget 2026: ಸಿಗರೇಟ್, ಗುಟ್ಕಾ ಮೇಲಿನ ಟ್ಯಾಕ್ಸ್ 60%ಕ್ಕೆ ಏರಿಕೆ? ಆದ್ರೆ ರೇಟ್ ಮಾತ್ರ ಹೆಚ್ಚಾಗಲ್ಲ! ನಿರ್ಮಲಾ ಮೇಡಂ ಮ್ಯಾಜಿಕ್ ಇದು.

  ನವದೆಹಲಿ:  ಬಜೆಟ್ ಭಾಷಣದ ನಂತರ “ಎಣ್ಣೆ ರೇಟ್ ಜಾಸ್ತಿ ಆಯ್ತಂತೆ, ಸಿಗರೇಟ್ ಟ್ಯಾಕ್ಸ್ ಹೆಚ್ಚಾಯ್ತಂತೆ” ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಾಬರಿ ಬೀಳುವ ಅಗತ್ಯವಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ. 1. ಮದ್ಯ ಮತ್ತು ಗುಜರಿ ಡೀಲರ್‌ಗಳಿಗೆ ರಿಲೀಫ್ (2% TCS): ಇಷ್ಟು ದಿನ ಮದ್ಯ (Alcohol), ಗುಜರಿ (Scrap) ಮತ್ತು ಖನಿಜಗಳ ಮಾರಾಟದ ಮೇಲೆ ವಿಧಿಸುತ್ತಿದ್ದ ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ದರಗಳಲ್ಲಿ ಗೊಂದಲವಿತ್ತು. ಕೆಲವೊಮ್ಮೆ ಇದು ಹೆಚ್ಚಿರುತ್ತಿತ್ತು. ಆದರೆ, ಬಜೆಟ್ 2026ರಲ್ಲಿ ಇದನ್ನು ಸರಳೀಕರಿಸಲಾಗಿದೆ. ಇನ್ಮುಂದೆ ಈ ಎಲ್ಲಾ ವ್ಯಾಪಾರಗಳ ಮೇಲೆ  ‘ಫ್ಲಾಟ್ 2% (ಶೇ. 2)’  ಟ್ಯಾಕ್ಸ್ ಇರಲಿದೆ. ಲಾಭವೇನು?  ಇದರಿಂದ ವ್ಯಾಪಾರಿಗಳಿಗೆ ಲೆಕ್ಕಾಚಾರ ಸುಲಭವಾಗಲಿದ್ದು, ತೆರಿಗೆ ಹೊರೆ ಕಡಿಮೆಯಾಗಲಿದೆ. ಇದು ‘ಬಿಸಿನೆಸ್ ಫ್ರೆಂಡ್ಲಿ’ ನಿರ್ಧಾರವಾಗಿದೆ. 2. ತಂಬಾಕು ಟ್ಯಾಕ್ಸ್ ಏರಿಕೆ: ಅಸಲಿ ಟ್ವಿಸ್ಟ್ ಇಲ್ಲಿದೆ! ಜಗಿಯುವ ತಂಬಾಕು, ಜರ್ದಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ‘ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ’ವನ್ನ (NCCD)  ಶೇ. 25 ರಿಂದ ಶೇ. 60 ಕ್ಕೆ  ಏರಿಸಲಾಗಿದೆ. ಈ ಸುದ್ದಿ ಕೇಳಿ ಧೂಮಪಾನಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ ಸತ್ಯವೇನು?  ಸರ್ಕಾರ ಒಂದೆಡೆ NCCD ಸುಂಕವನ್ನು ಏರಿಸಿದ್ದರೂ, ಇನ್ನೊಂದೆಡೆ ಅಬಕಾರಿ ಸ...

ಕರ್ನಾಟಕ ಬಂದ್‌: ಸರ್ಕಾರಿ ಕಚೇರಿ, ಶಾಲೆ ಕಾಲೇಜು ರಜೆ ಇದೆಯೇ? ಏನಿರುತ್ತೆ? ಏನಿರಲ್ಲ?

  ಕನ್ನಡ ಪರ ಸಂಘಟನೆಗಳು ಮಾರ್ಚ್‌ 22 ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಇವರಿಗೆ ಹಲವು ಸಂಘಟನೆಗಳು ನೇರ, ಬಾಹ್ಯ, ನೈತಿಕ ಬೆಂಬಲ ನೀಡಿವೆ. ಇನ್ನು ಕೆಲವರು ಬಂದ್‌ ಬೇಡ ಎಂದಿದ್ದಾರೆ. ಇತ್ತ ಬಂದ್‌ನ ದಿನ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜನರಲ್ಲಿದೆ. ಶನಿವಾರ ಏನಿರುತ್ತೆ? ಏನಿರಲ್ಲ? ಎಂಬ ವಿವರ ಇಲ್ಲಿದೆ.   ಬೆಂಗಳೂರು : ಕನ್ನಡ ಪರ ಸಂಘಟನೆಗಳು ಶನಿವಾರ ( ಮಾರ್ಚ್ ‌ 22) ಕರ್ನಾಟಕ ಬಂದ್ ‌ ಗೆ ಕರೆಕೊಟ್ಟಿವೆ . ಹೀಗಾಗಿ , ಸರ್ಕಾರಿ ಕಚೇರಿಗಳು , ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ ? ಇಲ್ಲವೋ ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ ? ಎಂಬ ಪ್ರಶ್ನೆ ಹಲವರಲ್ಲಿದೆ . ​ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ , ದಬ್ಬಾಳಿಕೆ ಖಂಡಿಸಿ ವಾಟಾಳ್ ‌ ನಾಗರಾಜ್ ‌ ನೇತೃತ್ವದಲ್ಲಿ   ಹಲವು ಸಂಘಟನೆಗಳು ಬಂದ್ ‌ ಗೆ   ಮುಂದಾಗಿವೆ . ಸದ್ಯ ಇದಕ್ಕೆ ವಿವಿಧ ಸಂಘಟನೆಗಳು ನೈತಿಕ , ಬಾಹ್ಯ ಬೆಂಬಲ ನೀಡಿವೆ . ಇದರಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ . ಆದರೆ , ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ - ಕಾಲೇಜುಗಳು , ಸರ್ಕಾರಿ ಕಚೇರಿಗಳು , ಸಾರಿಗೆ ಬಸ್ ‌ ಗಳು ಎಂದಿನಂತೆ ಸಂಚಾರ ನಡೆಸಲಿವೆ . ಬೆಂಗಳೂರು , ಜಿಲ್ಲಾ ಕೇಂದ್ರಗಳಲ್ಲಿ ಪ...