ಇತ್ತೀಚಿನ ದಿನಗಳಲ್ಲಿ ವ್ಯಾಟ್ಸಾಪ್ ಮೂಲಕ ಆರ್‌ಟಿಒ ಚಲನ್ ಎಂಬ ಹೆಸರಿನಲ್ಲಿ ಬರುತ್ತಿರುವ ಸಂದೇಶಗಳು ಅತೀವ ಅಪಾಯಕಾರಿಯಾಗಿವೆ. ಈ ಸಂದೇಶಗಳೊಂದಿಗೆ ಕಳುಹಿಸಲಾಗುತ್ತಿರುವ APK ಫೈಲ್ ಅನ್ನು ಡೌನ್‌ಲೋಡ್ ಮಾಡಿದರೆ ಅಥವಾ ಓಪನ್ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ ಹ್ಯಾಕ್ ಆಗುವ ಸಾಧ್ಯತೆಯಿದೆ. ಸೈಬರ್ ವಂಚಕರು ಈ ಹೊಸ ತಂತ್ರವನ್ನು ಬಳಸಿಕೊಂಡು ಸಾಮಾನ್ಯ ಜನರನ್ನು ಮೋಸ ಮಾಡುತ್ತಿದ್ದಾರೆ. ವಾಹನ ಇರುವ ಪ್ರತಿಯೊಬ್ಬರೂ ಈ ಸ್ಕ್ಯಾಮ್‌ನ ಗುರಿಯಾಗಬಹುದು ಏಕೆಂದರೆ ಬಹುತೇಕ ಚಾಲಕರ ಬಳಿ ಒಂದಾದರೂ ಟ್ರಾಫಿಕ್ ದಂಡ ಬಾಕಿ ಇರಬಹುದು ಎಂಬ ಭಯವನ್ನು ಇವರು ಬಳಸಿಕೊಳ್ಳುತ್ತಾರೆ ಭಾರತದಲ್ಲಿ ಸ್ಕೂಟರ್, ಬೈಕ್, ಕಾರು ಅಥವಾ ಇತರ ವಾಹನಗಳನ್ನು ಹೊಂದಿರುವವರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಪ್ರತಿ ಕುಟುಂಬದಲ್ಲೂ ಕನಿಷ್ಠ ಒಂದು ವಾಹನ ಇರುತ್ತದೆ. ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಸೀಟ್ ಬೆಲ್ಟ್ ಇಲ್ಲದೇ ಚಾಲನೆ, ಹೆಲ್ಮೆಟ್ ಧರಿಸದೇ ರೈಡಿಂಗ್ ಮಾಡುವುದು ಇತ್ಯಾದಿ ಸಣ್ಣ ತಪ್ಪುಗಳಿಂದಾಗಿ ಆರ್‌ಟಿಒ ದಂಡ ಬಾಕಿ ಉಂಟಾಗುವುದು ಸಾಮಾನ್ಯ. ಈ ಸಂದರ್ಭವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಆರ್‌ಟಿಒ ಕಚೇರಿ ಅಥವಾ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವ್ಯಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ಸಂದೇಶಗಳಲ್ಲಿ “ನಿಮ್ಮ ವಾಹನಕ್ಕೆ ಚಲನ್ ಇದೆ, ಡೌ...