Deepika Tc News: ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಅಂಧರ ಕ್ರಿಕೆಟ್ ತಂಡದ ಕ್ಯಾಪ್ಟನ್ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.
ಐದು ತಿಂಗಳ ಮಗು ಆಗಿದ್ದಾಗ ಉಗುರಿನಲ್ಲಿ ಪರಚಿಕೊಂಡು ಕಣ್ಣು ಹೋಯಿತು. ನರ ವೀಕ್ ಇದ್ದರಿಂದ ಆಪರೇಶನ್ ಮಾಡಿಸಲು ಆಗೋದಿಲ್ಲ ಎಂದು ಹೇಳಿದ್ದರಂತೆ.
ದೀಪಿಕಾ ಅವರು ಊಟಕ್ಕೆ ಒದ್ದಾಡಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಇಷ್ಟು ವರ್ಷ ಕಳೆದಿದೆ. ಕ್ರಿಕೆಟ್‌ನಿಂದ ಹಣ ಸಿಕ್ಕಿದರೆ, ಇಡೀ ತಿಂಗಳು ಮನೆಯವರಿಗೆ ಊಟ ಮಾಡೋಕೆ ರೇಶನ್ ಸಿಗುತ್ತದೆ ಎಂಬ ಆಸೆಯಿತ್ತಂತೆ. ಅದರಂತೆ ಅವರು ಕ್ರಿಕೆಟ್ ಆಡಿ ವರ್ಲ್‌ಕಪ್ ತಂದುಕೊಟ್ಟರು.
ನಾನು ಆನಂದಪುರ ಜಿಲ್ಲೆಯಾಗಿದ್ದು, ಈಗ ಸತ್ಯಸಾಯಿಯಾಗಿದೆ. ನಮ್ಮ ಊಟು ಕರ್ನಾಟಕ, ಆಂಧ್ರಪ್ರದೇಶದ ಬಾರ್ಡರ್‌ನಲ್ಲಿ ಬರುವುದು. ನಾನು ಕರ್ನಾಕಟದಲ್ಲಿ ಓದಿದ್ದೇನೆ. ನಮ್ಮ ಊರಿನಲ್ಲಿ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿರುವವರಿಗೆ ಊಟ-ತಿಂಡಿ ಕೂಡ ಸಿಗೋದಿಲ್ಲ ಎಂದು ಪವನ್ ಕಲ್ಯಾಣ್ ಮುಂದೆ ಹೇಳಿದ್ದಾರೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಬಳಿ ದೀಪಿಕಾ ಈ ವಿಚಾರವಾಗಿ ಮಾತನಾಡಿದ್ದರು. ದೀಪಿಕಾ ಅವರು ಸಮಸ್ಯೆ ಹೇಳಿಕೊಂಡು ಐದು ನಿಮಿಷಕ್ಕೆ ಓಕೆ ಎಂದಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಮಂಜೂರಿ ಆಗಿದೆಯಂತೆ.
ಮ್ಯಾಚ್‌ನಲ್ಲಿ ಹಣ ಸಿಗುತ್ತದೆ ಎಂದು ಎಷ್ಟೋ ಹೆಣ್ಣು ಮಕ್ಕಳು ಕ್ರಿಕೆಟ್ ರಂಗಕ್ಕೆ ಬರುವುದುಂಟು. ಇದರಿಂದ ಮನೆಗೆ ಸಹಾಯ ಮಾಡಬಹುದು ಎಂಬ ಆಸೆ ಇದೆ. ಗಬ್ಬರ್ ಸಿಂಗ್ ಸಿನಿಮಾವನ್ನು ನಾನು ಎಷ್ಟು ಬಾರಿ ನೋಡಿದ್ದೀನೋ ಗೊತ್ತಿಲ್ಲ, ನನಗೆ ಅಷ್ಟು ಇಷ್ಟ ಆಗಿತ್ತು. ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸ್ತೀರಿ ಎಂದು ನಂಬಿದ್ದೇನೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ