ವಿಷಯಕ್ಕೆ ಹೋಗಿ

WPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ವಡೋದರಾದ ಕೊತಾಂಬಿ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತಿದೊಡ್ಡ ಚೇಸ್ ಮಾಡಿದ ದಾಖಲೆ ಬರೆದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 49 ರನ್ ಜತೆಯಾಟವಾಡಿದರು. ಲಿಜೆಲ್ ಲೀ 37 ರನ್ ಗಳಿಸಿದರೆ, ಶಫಾಲಿ ವರ್ಮಾ 20 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 57 ರನ್ ಬಾರಿಸಿದರೆ, ಅಂತಿಮ 19ನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಶಿನೆಲ್ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. 25 ಎಸೆತಗಳಲ್ಲಿ 44 ರನ್ ಚಚ್ಚಿದ ಲೌರಾ ವಾಲ್ವಾರ್ಟ್ ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಯಾಲಿ ಸಟ್ಘರೆ, ಅರುಂಧತಿ ರೆಡ್ಡಿ ಹಾಗೂ ನಡೈನ್ ಡಿ ಕ್ಲರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಕೇವಲ 9 ರನ್‌ಗೆ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್‌ಸಿಬಿಗೆ ಎರಡನೇ ವಿಕೆಟ್‌ಗೆ ಜತೆಯಾದ ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ 165 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದರು. ಆರ್‌ಸಿಬಿ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲ್ಲಲಿದೆ ಎಂದು ಎಣಿಸಲಾಗಿತ್ತು. ಆದರೆ 17ನೇ ಓವರ್‌ನಲ್ಲಿ ವಾಲ್ 79 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಕಣಕ್ಕಿಳಿದ ರಿಚಾ ಘೋಷ್ 6 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ನೆಲಕಚ್ಚಿದ್ದ ಸ್ಮೃತಿ ಸಹ 87 ರನ್ ಗಳಿಸಿದ್ದಾಗ 19ನೇ ಓವರ್‌ನಲ್ಲಿ ಔಟ್ ಆದರು. ಕೊನೆಗೆ 8 ಎಸೆತಗಳಲ್ಲಿ 13 ರನ್ ಬೇಕಿದ್ದಾಗ ಕಣಕ್ಕಿಳಿದ ರಾಧಾ ಯಾದವ್ ಎರಡು ರನ್ ಹಾಗೂ ಸಿಂಗಲ್ ತೆಗೆದುಕೊಂಡ ಕಾರಣ ಪಂದ್ಯ ಕೊನೆಯ ಓವರ್ ತಲುಪಿತು. ಆರ್‌ಸಿಬಿಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ ಗೆಲ್ಲಲು 10 ರನ್ ಬೇಕಿದ್ದಾಗ ರಾಧಾ ಹಾಗೂ ನಡೈನ್ ಡಿ ಕ್ಲೆರ್ಕ್ ಸಿಂಗಲ್ ತೆಗೆದುಕೊಂಡರು. ಪರಿಣಾಮ 4 ಎಸೆತಕ್ಕೆ ಎಂಟು ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಸತತ ಎರಡು ಬೌಂಡರಿ ಚಚ್ಚಿದ ರಾಧಾ ಯಾದವ್ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಧಾ ಯಾದವ್ ಅಜೇಯ 12 ರನ್ ಗಳಿಸಿದರೆ, ನಡೈನ್ ಡಿ ಕ್ಲೆರ್ಕ್ ಅಜೇಯ 7 ರನ್ ಬಾರಿಸಿದರು.

ಡೆಲ್ಲಿ ಪರ ಶಿನೆಲ್ ಹೆನ್ರಿ ಎರಡು ವಿಕೆಟ್, ನಂದನಿ ಶರ್ಮಾ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್ ಪಡೆದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Royal Challengers Bengaluru

  Royal Challengers Bengaluru ,

Budget 2026: ಸಿಗರೇಟ್, ಗುಟ್ಕಾ ಮೇಲಿನ ಟ್ಯಾಕ್ಸ್ 60%ಕ್ಕೆ ಏರಿಕೆ? ಆದ್ರೆ ರೇಟ್ ಮಾತ್ರ ಹೆಚ್ಚಾಗಲ್ಲ! ನಿರ್ಮಲಾ ಮೇಡಂ ಮ್ಯಾಜಿಕ್ ಇದು.

  ನವದೆಹಲಿ:  ಬಜೆಟ್ ಭಾಷಣದ ನಂತರ “ಎಣ್ಣೆ ರೇಟ್ ಜಾಸ್ತಿ ಆಯ್ತಂತೆ, ಸಿಗರೇಟ್ ಟ್ಯಾಕ್ಸ್ ಹೆಚ್ಚಾಯ್ತಂತೆ” ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಾಬರಿ ಬೀಳುವ ಅಗತ್ಯವಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ. 1. ಮದ್ಯ ಮತ್ತು ಗುಜರಿ ಡೀಲರ್‌ಗಳಿಗೆ ರಿಲೀಫ್ (2% TCS): ಇಷ್ಟು ದಿನ ಮದ್ಯ (Alcohol), ಗುಜರಿ (Scrap) ಮತ್ತು ಖನಿಜಗಳ ಮಾರಾಟದ ಮೇಲೆ ವಿಧಿಸುತ್ತಿದ್ದ ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ದರಗಳಲ್ಲಿ ಗೊಂದಲವಿತ್ತು. ಕೆಲವೊಮ್ಮೆ ಇದು ಹೆಚ್ಚಿರುತ್ತಿತ್ತು. ಆದರೆ, ಬಜೆಟ್ 2026ರಲ್ಲಿ ಇದನ್ನು ಸರಳೀಕರಿಸಲಾಗಿದೆ. ಇನ್ಮುಂದೆ ಈ ಎಲ್ಲಾ ವ್ಯಾಪಾರಗಳ ಮೇಲೆ  ‘ಫ್ಲಾಟ್ 2% (ಶೇ. 2)’  ಟ್ಯಾಕ್ಸ್ ಇರಲಿದೆ. ಲಾಭವೇನು?  ಇದರಿಂದ ವ್ಯಾಪಾರಿಗಳಿಗೆ ಲೆಕ್ಕಾಚಾರ ಸುಲಭವಾಗಲಿದ್ದು, ತೆರಿಗೆ ಹೊರೆ ಕಡಿಮೆಯಾಗಲಿದೆ. ಇದು ‘ಬಿಸಿನೆಸ್ ಫ್ರೆಂಡ್ಲಿ’ ನಿರ್ಧಾರವಾಗಿದೆ. 2. ತಂಬಾಕು ಟ್ಯಾಕ್ಸ್ ಏರಿಕೆ: ಅಸಲಿ ಟ್ವಿಸ್ಟ್ ಇಲ್ಲಿದೆ! ಜಗಿಯುವ ತಂಬಾಕು, ಜರ್ದಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ‘ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ’ವನ್ನ (NCCD)  ಶೇ. 25 ರಿಂದ ಶೇ. 60 ಕ್ಕೆ  ಏರಿಸಲಾಗಿದೆ. ಈ ಸುದ್ದಿ ಕೇಳಿ ಧೂಮಪಾನಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ ಸತ್ಯವೇನು?  ಸರ್ಕಾರ ಒಂದೆಡೆ NCCD ಸುಂಕವನ್ನು ಏರಿಸಿದ್ದರೂ, ಇನ್ನೊಂದೆಡೆ ಅಬಕಾರಿ ಸ...

ಕರ್ನಾಟಕ ಬಂದ್‌: ಸರ್ಕಾರಿ ಕಚೇರಿ, ಶಾಲೆ ಕಾಲೇಜು ರಜೆ ಇದೆಯೇ? ಏನಿರುತ್ತೆ? ಏನಿರಲ್ಲ?

  ಕನ್ನಡ ಪರ ಸಂಘಟನೆಗಳು ಮಾರ್ಚ್‌ 22 ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಇವರಿಗೆ ಹಲವು ಸಂಘಟನೆಗಳು ನೇರ, ಬಾಹ್ಯ, ನೈತಿಕ ಬೆಂಬಲ ನೀಡಿವೆ. ಇನ್ನು ಕೆಲವರು ಬಂದ್‌ ಬೇಡ ಎಂದಿದ್ದಾರೆ. ಇತ್ತ ಬಂದ್‌ನ ದಿನ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜನರಲ್ಲಿದೆ. ಶನಿವಾರ ಏನಿರುತ್ತೆ? ಏನಿರಲ್ಲ? ಎಂಬ ವಿವರ ಇಲ್ಲಿದೆ.   ಬೆಂಗಳೂರು : ಕನ್ನಡ ಪರ ಸಂಘಟನೆಗಳು ಶನಿವಾರ ( ಮಾರ್ಚ್ ‌ 22) ಕರ್ನಾಟಕ ಬಂದ್ ‌ ಗೆ ಕರೆಕೊಟ್ಟಿವೆ . ಹೀಗಾಗಿ , ಸರ್ಕಾರಿ ಕಚೇರಿಗಳು , ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ ? ಇಲ್ಲವೋ ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ ? ಎಂಬ ಪ್ರಶ್ನೆ ಹಲವರಲ್ಲಿದೆ . ​ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ , ದಬ್ಬಾಳಿಕೆ ಖಂಡಿಸಿ ವಾಟಾಳ್ ‌ ನಾಗರಾಜ್ ‌ ನೇತೃತ್ವದಲ್ಲಿ   ಹಲವು ಸಂಘಟನೆಗಳು ಬಂದ್ ‌ ಗೆ   ಮುಂದಾಗಿವೆ . ಸದ್ಯ ಇದಕ್ಕೆ ವಿವಿಧ ಸಂಘಟನೆಗಳು ನೈತಿಕ , ಬಾಹ್ಯ ಬೆಂಬಲ ನೀಡಿವೆ . ಇದರಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ . ಆದರೆ , ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ - ಕಾಲೇಜುಗಳು , ಸರ್ಕಾರಿ ಕಚೇರಿಗಳು , ಸಾರಿಗೆ ಬಸ್ ‌ ಗಳು ಎಂದಿನಂತೆ ಸಂಚಾರ ನಡೆಸಲಿವೆ . ಬೆಂಗಳೂರು , ಜಿಲ್ಲಾ ಕೇಂದ್ರಗಳಲ್ಲಿ ಪ...